Thursday 25 June 2009

ಭಾಗ ೩

ನಮ್ಮ ಸ್ವಾಮಿ ಇಷ್ಟು ದಿನ ಎಲ್ಲಿ ನಾಪತ್ತೆ ಆಗಿದ್ದ ಅಂದ್ಕೊಂಡ್ರ !ಬೇಜಾನ್ ಕೆಲಸ ಇತ್ತೇನು ಅಂತ ಯೋಚನೆ ಮಾಡ್ತಾ ಇದ್ರೆ ......ಹೌದು ಪಾಪ, ಪ್ರಪಂಚದ ಪೇಚಾಟವನ್ನ ಇವನೇ ಅನುಭವಸ್ತ ಇದಾನೆ ಅಲ್ವೇ ??
ಎರಡು ತಿಂಗಳು ಎಲ್ಲಿ ಹಾಳಾಗಿ ಹೋಗಿದ್ಯೋ ಸ್ವಾಮಿ?ಏನು ಹೇಳ್ಲಿ -ಕೇಳಿ ನನ್ ಕಥೇನ ಅದೂ ನಿಮ್ಮ ಕರ್ಮ.
ಯಾವುದೇ ಮನೇಲಿ ಮಗ ಅನ್ನಿಸಿ ಕೊಂದೊನು,ಬೆಳೆದ ಮೇಲೆ ಒಳ್ಳೆ ಕೆಲಸ ಸೇರಿ,ಚೆನ್ನಾಗಿ ದುಡಿದು ಅಪ್ಪ ಅಮ್ಮ ನ ಬಗ್ಗೆ ವಿಶೇಷ ವಾದ ಗಮನ ಕೊಟ್ಟು ನೋಡ್ಕೋ ಬೇಕು .ಇವನು ಕೆಲಸ ನು ತಗೊಳಿಕ್ಕೆ ಆಗ್ಲಿಲ್ಲ.ಕೆಲಸ ಅಂತ ಮಾಡೋಕೆ ಶುರು ಮಾಡದರೆ ಬೆಳಿತ ಹೋಗ್ಬೇಕು.ಇವನು ಕಥೆನೇ ಬೇರೆ ಮನಸ್ಸು ಮಾಡಿ ಒಂದು ಕಡೆ ಉಳಿಲಿಲ್ಲ,ಬೆಳಿಲಿಲ್ಲ.ದುಡ್ಡು ಇವನ ಕೈ ಸೇರಲಿಲ್ಲ.ಇವು ಒಂದಕ್ಕೊಂದು ಯಾವ ತರ ಒಡ್ಕೊಂಡು ಬಂದವು ಅಂತಿರ?
ಮನೆಗೆ ೩ ಕಾಸು ಪ್ರಯೋಜ್ನಕೆ ಬಾರದಂತ ನವನಾಗಿ ಬಿಟ್ಟ.ಇವ್ನ ಖರ್ಚಿಗ್ ಬೇಕಾದಷ್ಟು ಮಾತ್ರ ದುಡಿದ.

Tuesday 28 April 2009

ಭಾಗ ೨


ನಮ್ಮ ಸ್ವಾಮಿ , ಶಾಲೆ ಮುಗಿಸಿದ್ದು ಕುದ್ರೆಮುಖದಲ್ಲಿ.ಅಪ್ಪ ಸೆಂಟ್ರಲ್ ಸರ್ಕಾರೀ ನೌಕರ.ಅದಕ್ಕೆ ಅವನಗೆ ಒಳ್ಳೆ ಕಡೆನೇ ಶಿಕ್ಷಣ ಸಿಕ್ಕಿತು.ಇವನು ತುಂಬ ನಾಚಿಕೆ ಸ್ವಭಾವದವನು.ಉಪವಾಸ ಇರ್ತಾನೆ ಆದರೆ ಹಸಿವು ಅಂತ ಊಟ ಕೇಳ್ದೆ ಇರೋನು.ಶಾಲೆ ಯಲ್ಲಿ ಯಾರ್ ಜೊತೆನು ಬೇರಿದೆ ಇವನ ಪ್ರಪಂಚದಲ್ಲೇ ಇರೋನು ಇವ್ನು .ಯಾಕೆ ಇವನು ಇಂಗೆ ಅಂತ ಯೋಚನೆ ಮಾಡ್ತಾ ಇದ್ದೀರಾ?ಇವನು ಹಂಗೆ!!!
ಇವನಲ್ಲಿ ಒಂದು ಭಾವನೆ ಯಾವಾಗಲು ಇತ್ತು.ಅದು ಏನು ಅಂದ್ರೆ ಇವನಪ್ಪ ಜಾಸ್ತಿ ಓದಿದವರಲ್ಲ ಅಂತ ಇವನ ನಂಬಿಕೆ.ಬೇರೆಯವರ ಅಪ್ಪಂದಿರು ತುಂಬ ಓದಿ ಒಳ್ಳೆ ಸ್ಥಾನದಲ್ಲಿ ಇದ್ದರೆ ಇವನಪ್ಪ ಮಾತ್ರ ಆ ಲಾಯಕ್ ಅಲ್ಲ ಅಂದ್ಕೊಂಡಿದ್ದ .ಯಾವ್ದೊಂದು ಆಟದಲ್ಲೂ ಆಸಕ್ತಿ ಇರಲಿಲ್ಲ ಎಲ್ಲ್ಲರೊಂದಿಗೆ ಬೆರಿಬೇಕು ಅಂತ ಅವನಿಗೆ ಯಾಕಾದ್ರು ಅನ್ನಿಸುತ್ತ ಇರಲಿಲ್ವೋ ಗೊತ್ತಿಲ್ಲ.ಇನ್ನು ಅವನಮ್ಮ ಸಪೂರವಗಿದ್ರು ಇದು ಅವರಮ್ಮನ್ನ ತನ್ನ ಗೆಳೆಯರಿಂದ ದೂರ ಇಟ್ಟಿದ್ದು.ಎಲ್ಲರು ರಜೆ ಬಂದ್ರೆ ಈಜಲಿಕ್ಕೆ,ಸುತ್ತೋಕೆ ಹೋಗ್ತಾ ಇದ್ರೆ ,ಇವ್ನು ತಾನು ತನ್ನ ಲೋಕ ಅನ್ಕೊಂಡಿದ್ದ .
ಇವನಿಗೆ ಒಂದೇ ಒಂದು ಹುಚ್ಚು ಇತ್ತು ಅದು ಕವಿತೆ ಗೀಚೋದು.ಎಲ್ಲೋ ಒಂದ್ ಮೂಲೆಗೆ ಹೋಗಿ ಇಲ್ಲ ಅಂದ್ರೆ ರಾಧಾಕೃಷ್ಣ ದೇವಾಸ್ಥಾನದ ಹತ್ರ ಒಂದು ಮರ ಹತ್ತಿ ಕೂತು ಬರಿತ ಇದ್ದ.ಇವನು ಯಾಕೆ ಹಿಂಗೆ ನಿಮಗೆ ಏನಾದ್ರು ಗೊತ್ತ?ಹಾಗಾದ್ರೆ ಎಸ ಎಂ ಎಸ ಮಾಡಿ ೯೪೮೦೪೨೫೫೮೧ ಗೆ .

Monday 27 April 2009

ಆತ್ಮ-Bhayography

ಹೆಸರು:ಶಿವಕುಮಾರ (ಸ್ವಾಮಿ)
ವಯಸ್ಸು:೨೮
ವೃತ್ತಿ: ಇಂಜಿನಿಯರ್

ಚಿತ್ರ ದಲ್ಲಿ ಕಾಣ್ತಾ ಇರೋ ವ್ಯಕ್ತಿ ನೇ ಕಥೆಯ ನಾಯಕ ಅಲ್ಲ ಖಳ-ನಾಯಕ.

ನನ್ನ ಆತ್ಮ-ಚರಿತ್ರೆ ಯನ್ನ ಯಾರದ್ರು ಯಾಕೆ ಓದಬೇಕು?

ಪ್ರಶ್ನೆ ನನ್ನನ್ನು ಕಾಡುತ್ತೆ!!ಆದರೆ ಇದರ ಉತ್ತರ ಮಾತ್ರ ನನ್ನ ಬಳಿ ಇಲ್ಲ.ಇದ್ರೂ ಕೇಳಲು ಕಾಲದ ಅಭಾವ ಇದೆ.ಆದರು........
ನಾ ಹೇಳುವುದೆನಂದರೆ ಪ್ರತಿ ಒಬ್ಬರು ತಾವು ಬದುಕಿನಲ್ಲಿ ಏನ್ ಆಗ ಬಾರದೋ,ನನ್ನಿಂದ ಏನ್ ಕಲಿಬೇಕು ಅಂತ ನಾನ್ ಹೇಳ್ತೀನಿ.

ಎಲ್ಲರಿಗು ತಾವು ಚೆನ್ನಾಗಿ ಓದಿ,ದೊಡ್ಡವರಾಗಿ ಒಳ್ಳೆ ಕೆಲಸಕ್ಕೆ ಸೇರಿ ಅಪ್ಪ ಅಮ್ಮನ್ನ ಸುಖವಾಗಿ ಇಟ್ಕೋಳೋ ಆಸೆ ಇದ್ದೆ ಇರುತ್ತೆ .ಮುಂದೆ ಚಲೋ ಹುಡುಗಿನ ಮದುವೆ ಆಗಿ ಮಕ್ಳನ್ನ ಮಾಡ್ಕೊಂಡು ಹಾಯಾಗಿ ಸಂಸಾರ ಮಾಡೋದಿರುತ್ತೆ.ಇದು ಯಾವುದೇ ಸಾಮಾನ್ಯವಾದ ಮನುಷ್ಯನಿಗೆ ಇರೋ ಸಹಜವಾದ ಗುಣ.
ನಮ್ಮ ಸ್ವಾಮಿ ಯಾರ ತಂಟೆ ತಕರಾರ್ಗು ಹೋಗದೆ ಇರೋ ಅಸ್ಸಾಮಿ.ಹಾಗಂತ ಇವನು ತುಂಬ ಸಾಚನು ಅಲ್ಲ.ಮಹಾನ್ ಛತ್ರಿ ನನ್ ಮಗ.